Dance Appu Dance By Malli Sannappanavar

Modi Rocks In America by Malli Sannappanavar (Indian PM Narendra Modi)

'ಮುತ್ತಿನ' ಹನಿಗಳು

ಪ್ರೇಯಸಿ ಇನ್ನೇನು ಕನಸಲ್ಲಿ ಬಂದು ಹೂಮುತ್ತು ನೀಡುತ್ತಾಳೆಂಬ ಭಾವನೆಯಲ್ಲಿ ಮನದಲ್ಲೆದ್ದ ಚಳಿಗುಳ್ಳೆಗಳಂತೆ, ಕಚಗುಳಿಯಂತೆ. ಪ್ರೇಮದ ಕನಸಿನ ಹುಡುಗ-ಹುಡುಗಿಯರಿಗಾಗಿ ಒಂದಿಷ್ಟು 'ಮುತ್ತಿನ' ಹನಿಗಳು.

ಇಂದಿನ ಸುದ್ದಿ

ಪ್ರತಿದಿನದ
ಬಿಸಿಸುದ್ದಿಯಲ್ಲಿ
ರೆಡ್ಡಿಗಳು ಮತ್ತು
ಸಿಎಂ ಯಡ್ಡಿ!
ಪ್ರೇಮಿಗಳ
ದಿನದಂದು ಮಾತ್ರ
ಮುತಾಲಿಕ್ ಮತ್ತು
ಪಿಂಕ್‌ಚೆಡ್ಡಿ!

***
ಪ್ರೇಮಿಸಂ

ದೀಪಾವಳಿಯಾಗಿದ್ದರೆ
ಹೊಡೆಯುತ್ತಿದ್ದೆ
ಪಟಾಕಿ ಬೀದಿಲೆಲ್ಲಾ!!
ಯುಗಾದಿಯಾಗಿದ್ದರೆ
ಹಂಚುತ್ತಿದ್ದೆ ಎಲ್ಲರಿಗೂ
ಬೇವು-ಬೆಲ್ಲಾ!!
ಇಂದು ಪ್ರೇಮಿಗಳದಿನ
ಒಂದಾಗಲಿ ನನ್ನ ತುಟ್ಟಿ
ಮತ್ತು ನಿನ್ನ ಗಲ್ಲಾ!!!

***
ರಾಖಿ-ಕಾ-ಸ್ವಯಂವರ್

ಸ್ಪಧೆ೯ಯಲ್ಲಿದ್ದ ಗುಂಡ
ಅಂದ ನನ್ನ ಕೈಯಿಂದ
ತಾಳಿ ಕಟ್ಟಿಸಿಕೊಳ್ಳುತ್ತಾಳೆ
ಕೊನೆಗೆ ರಾಖಿ!
ಕೊನೆಗೆ ಅವಳ
ಕೈಯಿಂದ ಗುಂಡ
ಕಟ್ಟಿಸ್ಸಿಕೊಂಡ
ದೊಡ್ಡದೊಂದು ರಾಖಿ!!

***
ಗಾಂಧಿ ಹೇಳಿದ್ದು

ತುಂಡು ಬಟ್ಟೆ
ಸಾಕು ನನ್ನ
ಮಾನ ಮುಚ್ಚೋಕೆ
ಅಂದರು ಗಾಂಧಿ!
ಮಹಾತ್ಮ ಗಾಂಧಿ
ಅಂದುಕೊಂಡ್ರಾ..?
ಅಲ್ಲ ಹಾಗಂದಿದ್ದು
ಪೂಜಾ ಗಾಂಧಿ!!

***
ಗಾಂಧಿನಗರ

ಗಾಂಧೀಜಿಯವರು
ತೋರಿಸಿದ್ದು
ಅಹಿಂಸೆ ಬಗ್ಗೆ
ಆಸಕ್ತಿ ಹೆಚ್ಚು!
ಗಾಂಧಿನಗರದವರು
ತೋರಿಸುತ್ತಿರುವುದು
ಹಿಂಸೆ ಮತ್ತು
ಲಾಂಗು-ಮಚ್ಚು!!