ಕುಮಾರಣ್ಣನ ಮೇಲೆ ಹನಿ ಹನಿ ಹನಿ
ಇದು ರಾಜಕಾರಣವೋ, 'ಕುರ್ಚಿ'ಕಾರಣವೋ ಗೊತ್ತಿಲ್ಲ. ರಾಜ್ಯದಲ್ಲಿ ರಾಜಕೀಯ ದೊಂಬರಾಟವಂತೂ ಶುರುವಾಗಿದೆ. ಇದನ್ನೆಲ್ಲ ಓದಿ, ಕೇಳಿ ಎಲ್ಲರಿಗೂ ಸಾಕಾಗಿದೆ. ಹೀಗಾಗಿ ರಾಜಕೀಯ ನಾಯಕರ ಮೇಲಿನ ತಮಾಷೆ ಪದ್ಯಗಳತ್ತ ಕಣ್ಣಾಡಿಸೋಣ.
ಮಲ್ಲಿ ಸಣ್ಣಪ್ಪನವರ್
ಗ್ರಾಮ ವಾಸ್ತವ್ಯ
ದಿನಾ ಹೆಂಡತಿಯ
ಕೈ ಅಡುಗೆ ಉಂಡು
ಬೇಜಾರಣ್ಣಾ!
ಅದಕ್ಕೆ ತಾನೇ ಗ್ರಾಮ
ವಾಸ್ತವ್ಯ ಮಾಡೋದು
ಕುಮಾರಣ್ಣಾ !!
ಯಡಿಯೂರಪ್ಪ ರೆಡಿ
ಕನಾ೯ಟಕದ
ಮುಖ್ಯಮಂತ್ರಿಯಾಗಲು
ಯಡಿಯೂರಪ್ಪ ರೆಡಿ!
ಅದಕ್ಕೆ ಆಶೀರ್ವಾದ
ಮಾಡಬೇಕು
ಕುಮಾರಣ್ಣನ ಡ್ಯಾಡಿ!!
ತಲೆ-ತಲಾಂತರ
ಚಿತ್ರರಂಗದ
ತಲೆ-ತಲಾಂತರ
ರಾಜಣ್ಣ ಶಿವಣ್ಣ
ರಾಘಣ್ಣ!
ರಾಜಕೀಯದ
ತಲೆ-ತಲಾಂತರ
ದೇವಣ್ಣ ಕುಮಾರಣ್ಣ
ರೇವಣ್ಣ !!
ನನಗೇನು ಕಮ್ಮಿ ?
ಮುಖ್ಯಮಂತ್ರಿ
ಆಗಲು
ನನಗೆನಾಗಿದೆ
ಕಮ್ಮಿ!
ಆದರೆ
ಒಪ್ಪಬೇಕಲ್ಲಾ
ಗೌಡ ಮತ್ತು
ಅವರ ಮಗ
ಕುಮ್ಮಿ!
ರಾಜಕೀಯ ನಿವೃತ್ತಿ
ರಾಜಕೀಯದಿಂದ
ಗೌಡರು ರಿಟೈರ್
ಆಗುತ್ತಾ ಆಗುತ್ತಾ
ಸುಸ್ತಾದರು !
ಕೊನೆಗೆ
ರಿಟೈರಾದವರು
ಗೌಡರಲ್ಲ
ಮತದಾರರು !!
3 comments:
ಬೊಂಬಾಟಾಗಿದೆ ಮಗಾ.
ಹನಿಗವನಗಳು ಸೂಪರ್.. ಸುಮ್ನೆ ಓದುತ್ತಿದ್ದರೆ ಹಾಗೆ ಚುಟುಕುಗಳ ರಾಜ ದುಂಡೀರಾಜರ ನೆನಪು ಮಾಡಿಸಿಬಿಟ್ಟಿರಿ... ತುಂಬಾ ಚೆನ್ನಾಗಿ ಬರೆಯುತ್ತೀರಿ... ಬರೆಯುತ್ತಿರಿ...
ತುಂಬಾ ಚೆನ್ನಾಗಿದೆ ಹನಿಗಳು .. ರಾಜಕೀಯ ನಿವೃತ್ತಿ ತುಂಬಾ ಇಸ್ಟವಾಯ್ತು.. :)
Post a Comment