ಚುಂಬನ ಚಳಿಚಳಿ
ತಾಳಲಾರೆ
ನಾನು ಈ
ಚಳಿಗಾಲದ
ಚಳಿಚಳಿ!
ಕೊಡುವೆಯಾ
ನಲ್ಲೆ ನಿನ್ನ ಬಿಸಿ
ಚುಂಬನದ
ಬಳವಳಿ!
ನಿರಾಕರಿಸಬೇಡ
ನನ್ನ ಈ
ಪ್ರೀತಿಯ
ಕಳಕಳಿ!
ನಿರಾಕರಿಸಿದರೆ
ನಾ ಮಾಡುವೆ
ಚುಂಬನಕ್ಕಾಗಿ
ಚಳವಳಿ!
ಮುದ್ದಾದ ಕೊಡೆ
ಚೆಲುವೆಯ ಕೈಯಲ್ಲಿ
ಇತ್ತು ಕಪ್ಪು ಬಣ್ಣದ
ಮುದ್ದಾದ ಕೊಡೆ !
ನಾನಂದೆ ಅವಳ
ಕೊಡೆ ನೋಡಿ
`ಮುದ್ದು ಕೊಡೆ'!
ಸಿಟ್ಟಿನಿಂದ ಕಾರವಾಗಿ
ನೋಡಿದಳು ಅವಳು
ನನ್ನ ಕಡೆ!
ನಾನಂದೆ, ಅಷ್ಟು
ಸಿಟ್ಟಿದ್ದರೆ ನನ್ನ
ಕಪಾಳಕ್ಕೆ ಹೊಡೆ!
ನನ್ನ ಮುಖಕ್ಕೆ
ಬೀಸಾಡಿ ಹೋದಳು
ಅವಳ ಕೊಡೆ!
ಕಾಯುತ್ತಿರುವೆ
ಹಿಂದಿರುಗಿಸಲು
ಅವಳ ಕೊಡೆ!
ಹಿಂದಿರುಗಿಸಲು
ಅವಳ ಕೊಡೆ!
ಅವಳು ಬಂದಿಲ್ಲಾ
ತಿರುಗಿ ಮತ್ತೆ
ಈ ಕಡೆ!
ತಿರುಗಿ ಮತ್ತೆ
ಈ ಕಡೆ!
ದಯವಿಟ್ಟು ಕಳಿಸಿರಿ
ಬಂದರೆ ಅವಳು
ನಿಮ್ಮ ಕಡೆ!
ತಿರುಗಿಸಲೇ ಬೇಕು
ನಾನು ಅವಳ
ಮುದ್ದು ಕೊಡೆ!
ಚೆಲುವೆ
ಹಾಲಿನಂತೆ ಹೊಳಪು
ಅವಳ ಮೈ`ಬಣ್ಣಾ'
ಸಿಂಹದಂತ ನಡುಗೆ
ಅವಳ ನಡು `ಸಣ್ಣಾ'
ಕರಗಿ ಹೋದೆ ಕಂಡು
ಮೀನಿನಂತ ಅವಳ `ಕಣ್ಣಾ'
ಹತ್ತಿರ ಬಂದು ಅಂದಳು
ನೀನೇ ನನ್ನ `ಅಣ್ಣಾ'
1 comment:
ಆಹಾ...ನಿಮ್ಮ ಕವನ ಓದಿ ಖುಶಿಯಿಂದ ನಕ್ಕು ನಕ್ಕು...ಊಹೂಂ...ನಾನೊಬ್ಬಳೇ ನಕ್ಕರೆ ಮಜಾ ಸಾಲದು....ನನ್ನ ಗೆಳತಿಗೂ ಹೇಳುವಾಸೆ...ಈಗಲೇ ಹೇಳಿ ಬಿಡುವೆ.....
ಅಂದಹಾಗೆ ನಿಮಿಗೆ ತುಂಬಾ ಧನ್ಯವಾದಗಳು.....
ಓದುವುದು ನನಗೂ ಮೆಚ್ಚು
ಆಗಲಿ ನನ್ನ ಜ್ನಾನ ಹೆಚ್ಚು
ಬರೆಯುವುದೂ ನನಗೆನೋ ಇಷ್ಟ
ಸೋಮಾರಿತನ ಬಿಡುವುದೇ ಕಷ್ಟ
ಇರಲಿ ಬಿಡಿ ನಿಮಗಿಲ್ಲ ನಷ್ಟ
ನನಗೊತ್ತು ಓದುಗರೇ ನಿಮಗೆ ಇಷ್ಟ !!!
Post a Comment